Skip to main content

Posts

Showing posts from March, 2013
ಕನ್ನಡ ತಾಳೆಯೋಲೆ ಗ್ರಂಥಗಳ ಚಿತ್ರಕಲಾ ವಿನ್ಯಾಸ   ಕೆ. ವೆಂಕಟೇಶ್     DME MFA ಕನಾರ್ಟಕದಲ್ಲಿ   ದೊರೆಯುವ ತಾಳೆಯೋಲೆ ಹಸ್ತಪ್ರತಿ ಗ್ರಂಥಗಳ ಭಂಡಾರಗಳಲ್ಲಿ- ಲೌಕಿಕ, ಆಗಮಿಕ, ಪಾರಮಾರ್ಥಿಕ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಕಾವ್ಯ, ಇತಿಹಾಸ, ಜ್ಯೋತಿಷ ಶಾಸ್ತ್ರ, ಶಿಲ್ಪಶಾಸ್ತ್ರ, ನೃತ್ಯಶಾಸ್ತ್ರ, ಸಂಗೀತ, ವೈದ್ಯ, ವ್ಯಾಕರಣ, ಪಂಚಾಂಗ, ಶಬ್ದಾಲಂಕಾರ, ನಾಟಕ, ಧರ್ಮಶಾಸ್ತ್ರ, ವೇದವೇದಾಂಗ, ಪುರಾಣ, ಗಜ ಆಗಮ, ಚಿತ್ರಕರ್ಮ, ಗಣಿತ, ರತ್ನ ಪರೀಕ್ಷೆ, ವಾಸ್ತು, ಮೊದಲಾದ ವ್ಯೆವಿಧ್ಯಮಯವಾದ ಗ್ರಂಥಗಳು ಸಿಗುತ್ತದೆ. ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ, ಜನಾಂಗದಿಂದ ಜನಾಂಗಕ್ಕೆ, ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ - ಧರ್ಮದತ್ತಿಯಾಗಿ ಉಳಿದುಕೊಂಡು ಬಂದಿದೆ.  ಪ್ರಾಚೀನ ಕಾಲದಿಂದಲೂ ತಾಳೆಗರಿಯ ಮೇಲೆ  ಕಂಟದಿಂದ,  ಕೈವಾರ, ಹಾಗೂ ರೇಖಾಪಟ್ಟಿ ಮುಂತಾದ ಸಾಧನಗಳಿಂದ ಕೊರೆದು, ರೇಖಾಚಿತ್ರ ಬಿಡುಸುತ್ತಿದ್ದುದಕ್ಕೆ 'ಪತ್ರಚ್ಛೇದ' ಎಂಬ ಪರಿಭಾಷೆ ಬಳಿಕೆಯಲ್ಲಿದೆ.  ಹಸ್ತಪ್ರತಿಗಳನ್ನು ಕಲಾಪೂರ್ಣವಾಗಿ ಅಲಂಕರಿಸುತ್ತ ಬಂದಿದ್ದರೂ ನಾವು ಮಾತ್ರ ಅವುಗಳನ್ನು ಕಾವ್ಯ ಇಲ್ಲವೆ ಶಾಸ್ತ್ರದೃಷ್ಟಿಯಿಂದ ನೋಡಿ ಪರಿಶೀಲನೆಮಾಡುತ್ತ ಬಂದೆವೇ ಹೊರತು ಅಲ್ಲಿಯ ಕಲಾಪ್ರಜ್ನೆಯನ್ನು ಪರಿಶೀಲಿಸುವ ಪ್ರಯತ್ನ ನಡೆದಿಲ್ಲ.  ಕಾಲಗರ್ಭದಲ್ಲಿ ಅಡಗಿಹೋದ ಅಸಂಖ್ಯಾತ ಹಸ್ತಪ್ರತಿಗಳೊಡನೆ ಪತ್ರಚ್ಛೇದನ...