Skip to main content

Posts

Showing posts from April, 2013

ಅಗ್ರಹಾರದ ಲಕ್ಷ್ಮಿ ನರಸಿಂಹನ್ : ನೆನಪು

ಅಗ್ರಹಾರದ ಲಕ್ಷ್ಮಿ ನರಸಿಂಹನ್ : ಎಚ್. ಶೇಷಗಿರಿರಾವ್   ಡಾ. ಅಗ್ರಹಾರದ ಲಕ್ಷ್ಮಿ ನರಸಿಂಹನ್ ಕನ್ನಡ ಕಲಾಲೋಕದಲ್ಲಿ ಕಳೆದ ಮೂರು ದಶಕದಿಂದ ನಡೆಯುವ ಯಾವುದೇ ಘಟನೆಗೆ ಸಾಕ್ಷಿ ಪ್ರಜ್ಞೆಯಾಗುತಿದ್ದವರು ಅಗ್ರಹಾರದ ಲಕ್ಷ್ಮಿನರಸಿಂಹನ್. ಕಲಾವಲಯದಲ್ಲಿ ಅ.ಲ.ನರಸಿಂಹನ್ ಎಂದೆ ಸುಪರಿಚಿತರು. ಕಲಾಪ್ರದರ್ಶನ ಆತ್ಮೀಯರಿಗೆ ಅಲನ.  ಕಲಾಶಿಬಿರ,ಕಲಾ ಪುಸ್ತಕದ ಲೋಕಾರ್ಪಣೆ,  ಅದು ಎಲ್ಲಿಯೇ ನಡೆಯಲಿ  ಅವರು  ಅಲ್ಲಿ ಅವರು ಹಾಜರು. ಕಲಾವಿಮರ್ಶೆ ಕಲಾಇತಿಹಾಸ ಅವರ ಹೃದಯಕ್ಕೆ ಹತ್ತಿರ. ಕಲಾಪ್ರಪಂಚವು ಒಬ್ಬ ಸಕ್ರಿಯ ಸಹೃದಯಿಯನ್ನು ಮೊನ್ನೆ ಶುಕ್ರವಾರ ಕಳೆದುಕೊಂಡಿತು. ಕಲಾ ಪ್ರಪಂಚದ ದಾಖಲೀಕರಣದ ಸರದಾರರವರು.ಉತ್ತಮ ಛಾಯಾಗ್ರಾಹಕ. ನೂರಾರು ಕಲಾವಿದರ ಅಸಂಖ್ಯ ಚಿತ್ರಗಳು ಅವರ ಕ್ಯಾಮೆರಾ `ಚಿಪ್'ನಲ್ಲಿ ಸೆರೆಯಾಗಿವೆ. ಅನೇಕ ವರ್ಷಗಳವರೆಗೆ ತೆಗೆದ ಅವರು ಚಿತ್ರದ ರೀಲುಗಳು ಕಿಲೋ ಮೀಟರ್‌ಗಟ್ಟಲೆ ಉದ್ದ ಚಾಚಿಕೊಳ್ಳುತ್ತವೆ.`ಅವರೊಬ್ಬ ಚಿತ್ರಕಲಾ ವಿಶ್ವಕೋಶವಾಗಿದ್ದರು' ಎಂದು ಎಸ್.ಜಿ. ವಾಸುದೇವ ನೆನೆಯುತ್ತಾರೆ. ಅ.ಲ.ನರಸಿಂಹನ್ ೧೯೪೬ನೆಯ,ಡಿಸೆಂಬರ್ ೧೯ರಂದುಬೆಂಗಳೂರಿನಲ್ಲಿ ಜನಿಸಿದರು. ತಂದೆ ಅಗ್ರಹಾರದ ತಿರುಮಲಾಚಾರ್‌ ಮತ್ತು ತಾಯಿ ಅಲಮೇಲಮ್ಮ. ಅವರದು ಮಂಡ್ಯದ ವಿಶಿಷ್ಟಾದ್ವೈತ ಸಂಪ್ರದಾಯದ ಮನೆತನ.ಅದಕ್ಕೆ ಮೊದಲಿನಿಂದಲೂ ಮೇಲುಕೋಟೆ ಮತ್ತು ಪು.ತಿ.ನ ಎಂದರೆ ಅಚ್ಚು ಮೆಚ್ಚು.  ಬಾಲಕ ನರಸಿಂಹನಿಗೆ ಎಳವೆಯಲ್ಲಿಯೇ ಪುಸ್ತಕ ದೀಕ್ಷೆ.  ಕಾರಣ ತ